ದೂರ ಹೋಗದಿರು ಬಲು ದೂರ ಹೋಗದಿರು
ನಿನಗೂ ತಿಳಿವಿದೆ ನನಗೂ ಅರಿವಿದೆ
ನಾವಿಬ್ಬರೂ ಸವೆಸುವ ಹಾದಿ
ಎಂದಿಗೂ ಒಂದಾಗದೆಂದು
ದೂರ ಹೋದರೂ ನನ್ನ ನೆನಪಿನಂಗಳದಲ್ಲಿ ನಲಿದಾಡುತಿರು
ಅಗಲದಿರು ಅಗಲದಿರು
ನೀನೆಂದೂ ಅಗಲದಿರು
ಎಷ್ಟೊಂದು ಸುಖದ ಕ್ಷಣಗಳಿದ್ದವು
ಎಲ್ಲವನ್ನೂ ತೊರೆದುಬಿಟ್ಟಿಯಲ್ಲಾ
ಒಂದೇ ಒಂದು ಬಿಗುಮಾನದ ಆ ಕ್ಷಣ
ಮನವೊಲಿಸಿದರೂ ಸಡಿಲವಾಗದ ಬಿಗುಮಾನ
ಆದರೂ ಹೃದಯ ಕೇಳಲೊಲ್ಲದು
ಕಣ್ಣಿನಿಂದ ಹೃದಯದ ಬೆಂಕಿಯೇ ನೀರಾಗಿ ಹನಿಯುತಿದೆ
ಅಗಲದಿರು ಅಗಲದಿರು
ನೀನೆಂದೂ ಅಗಲದಿರು
ಸಂವತ್ಸರ ಕಳೆಯುತಿದೆ
ಸಂವತ್ಸರ ಮರಳುತಿದೆ
ಆದರೂ ನೋವಿನ ಕಾಲ ಬದಲಾಗಲಿಲ್ಲವಲ್ಲಾ
ನಿನ್ನ ನೆನಪು ಇರುವಷ್ಟು ಆಳ
ಸಮುದ್ರದಲ್ಲಿರುವುದು ಸಾಧ್ಯವೇ
ಯಾರು ತಿಳಿದಿಹರು ಮುಂದೇನಾಗುವುದೆಂದು
ಇನ್ನೂ ಏನೇನೋ ಅನುಭವಿಸಬೇಕಿದೆಯೋ
ಯಾರು ಬಲ್ಲರು ಯಾರು ಬಲ್ಲರು
ಅಗಲದಿರು ಅಗಲದಿರು
ನೀನೆಂದೂ ಅಗಲದಿರು
ಅಗಲಿದರೂ ನೀನು
Subscribe to:
Post Comments (Atom)
1 comment:
ಸ್ವಾಮಿ! ವಿರಹಕ್ಕೆ ಪೆಟೇಂಟ್ ನಾವು ತಗೊಂಡಿದೀವಿ,ಬಳಸೋಕೆ ಅನುಮತಿ ಪಡೀಬೇಕಾಗುತ್ತೆ.:-)
"ನಾನು ನಿನ್ನಿಂದ ಕೇಳಿದ್ದು ಕಡಿಮೆ, ಪಡೆದದ್ದು ಹೆಚ್ಚು" ಸೇರಿದಂತೆ, ದ್ವೀತಿಯಾರ್ಧ ಬೊಂಬಾಟ್ ಗುರು..
ಮುಂದುವರೆಸಿ ನಿಮ್ಮ ಬರೆವಣಿಗೆ..
Post a Comment